ವ್ಯಾಂಟ್‍ಹಾಫ್, ಜಾಕೊಬಸ್ ಹೆನ್ರಿಕಸ್
	1852-1911. ಡಚ್ ಭೌತರಸಾಯನವಿe್ಞÁನಿ. ವೈದ್ಯನ ಮಗನಾಗಿ ಜನಿಸಿದ ಈತ ತನ್ನ ತಂದೆ ತಾಯಿಯರ ಅಪೇಕ್ಷೆಗೆ ವಿರುದ್ಧವಾಗಿ ರಸಾಯನವಿe್ಞÁನದಲ್ಲಿ ಆಸಕ್ತನಾದ. ಜರ್ಮನಿಯಲ್ಲಿ ಕೆಕುಲೆ (1829-96) ಬಳಿಯಿದ್ದು ಸಾಕಷ್ಟು ಪ್ರೋತ್ಸಾಹ ಸಿಗದೆ ನೆದರ್ಲೆಂಡಿಗೆ ಮರಳಿದ. ಪಿಎಚ್.ಡಿ. ಪದವಿ ಸಂಪಾದಿಸಿದ ಅನಂತರ ಇವನು ಆಗ್ರ್ಯಾನಿಕ್ ಸಂಯುಕ್ತಗಳ ರಚನೆ ಕುರಿತ ಒಂದು ಐತಿಹಾಸಿಕ ಪ್ರಬಂಧ ಮಂಡಿಸಿದ. ಸುಮಾರು ಅರ್ಧ ಶತಮಾನದಷ್ಟು ಹಿಂದಿನಿಂದಲೂ ಕೆಲವು ಸಂಯುಕ್ತಗಳು ಮಾತ್ರ ಸಮತಲ ಧ್ರ್ರುವೀಕೃತ ಬೆಳಕಿನ ಸಮತಲವನ್ನು ಎಡಕ್ಕೂ ಬಲಕ್ಕೂ ತಿರುಗಿಸುವುದು ಏಕೆ ಎಂಬುದು ಬಗೆಹರಿಯದ ಸಮಸ್ಯೆಯಾಗಿತ್ತು. ಇದಕ್ಕೆ ಸಂಯುಕ್ತ ಅಣುವಿನಲ್ಲಿರುವ ಯಾವುದೋ ಅಸಮಮಿತಿ (ಅಸಿಮೆಟ್ರಿ) ಕಾರಣವಿರಬಹುದೆಂದು ಬಿಯೊ ಮತ್ತು ಪ್ಲಾಸ್ಟರ್ ಎಂಬವರು ಸಲಹೆ ಮಾಡಿದ್ದರು. ಆದರೆ ಅಸಮಮಿತಿ ಹುಟ್ಟುವುದು ಹೇಗೆಂಬುದನ್ನು ಅವರು ತಿಳಿಸಿರಲಿಲ್ಲ. ಬಹುತೇಕ ಆಗ್ರ್ಯಾನಿಕ್ ಸಂಯುಕ್ತಗಳಿರುವುದು ಸಹವೇಲೆನ್ಸಿಬಂಧ, ಇದಕ್ಕೆ ನಿಶ್ಚಿತ ದಿಶೆಗಳುಂಟು. ಮಿಥೇನ್‍ನ ಒಂದು ಅಣುವಿನಲ್ಲಿ (ಅಊ4) ಕಾರ್ಬನ್ ಪರಮಾಣು ಒಂದು ಸಕ್ರಮ ಚರ್ತುರ್ಮುಖಿಯ ಕೇಂದ್ರದಲ್ಲಿದೆ. ನಾಲ್ಕು ಹೈಡ್ರೊಜನ್ ಪರಮಾಣುಗಳು ಚತುರ್ಮುಖಿಯ ನಾಲ್ಕು ಮೂಲೆಗಳಲ್ಲಿವೆ. ಪ್ರತಿಯೊಂದು ಊ-ಅ-ಊ ಕೋನವೂ 109028'. ಈ ದಿಶೀಯತೆಯ ಪರಿಣಾಮವಾಗಿ ಸಹವೇಲೆನ್ಸಿಯ ಸಂಯುಕ್ತಗಳಿಗೆ ಮೂರು ಆಯಾಮದ ರಚನೆಯುಂಟು. ಹೀಗೆ ಒಂದು ಕಾರ್ಬನ್ ಪರಮಾಣುವಿಗೆ ನಾಲ್ಕು ಬೇರೆ ಬೇರೆ ಪರಮಾಣುಗಳೊ ಅಥವಾ ಗುಚ್ಛಗಳೊ ಲಗತ್ತಾದರೆ ಅದು ಅಸಮಮಿತಿ ಕಾರ್ಬನ್ ಎನಿಸಿಕೊಳ್ಳುತ್ತದೆ. ಆಗ ಎರಡು ಬಗೆಯ ರಚನಾವಿನ್ಯಾಸ ಸಾಧ್ಯ. ಅಣು ಮತ್ತು ಅದರ ದರ್ಪಣ ಪ್ರತಿಬಿಂಬವನ್ನು ಅಧ್ಯಾರೋಪಿಸಲಾಗದು (ಸೂಪರ್‍ಇಂಪೋಸ್), ದ್ಯುತಿಪಟುತ್ವಕ್ಕೆ ಇದು ಕಾರಣ. ಈ ಸಂಶೋಧ ನೆಯ ಕೀರ್ತಿ ವ್ಯಾಂಟ್ ಹಾಫ್ ಮತ್ತು ಲೆಬೆಲ್(1847-1930) ಎಂಬವರಿಗೆ ಸಲ್ಲುತ್ತದೆ. ವ್ಯಾಟ್‍ಹಾಫ್ 1878ರಲ್ಲಿ ಆಮ್‍ಸ್ಟರ್‍ಡಾಮ್ ವಿಶ್ವವಿದ್ಯಾಲಯದ ರಸಾಯನ ಭೂಗರ್ಭ ಮತ್ತು ಖನಿಜವಿe್ಞÁನ ಪೀಠಗಳ ಜಂಟಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಈ ಅವಧಿಯಲ್ಲೇ ಇವನು ಆಗ್ರ್ಯಾನಿಕ್ ರಸಾಯನವಿe್ಞÁನ ಬಿಟ್ಟು ಭೌತವಿe್ಞÁನದಲ್ಲಿ ಆಸಕ್ತನಾದುದು. ಉಷ್ಣಗತಿವಿe್ಞÁನ ಮತ್ತು ರಾಶಿ ಕ್ರಿಯಾನಿಯಮಗಳನ್ನು ನಿರೂಪಿಸಿದ. ಆದರೆ ಹತ್ತು ವರ್ಷಗಳ ಮುಂಚೆಯೇ ಗಿಬ್ಸ್, ಗುಲ್ಡ್‍ಬರ್ಗ್ ಮತ್ತು ವಾಗೆಯವರು ಈ ಬಗ್ಗೆ ಸಂಶೋಧಿಸಿಯಾಗಿತ್ತು. ಹೀಗಾಗಿ ಅವರಿಗೆ ಗೌರವ ಸಂದಿದ್ದು ನ್ಯಾಯ. ಆದಾಗ್ಯೂ ಇವನನ್ನು ಉಷ್ಣಗತಿ ವಿe್ಞÁನದ ಹಂಬಲ ಬಿಡಲಿಲ್ಲ. ತತ್ಫಲವೇ ಇಂದು ಪ್ರಸ್ತುತವೆನಿಸಿರುವ ಸಾರರಿಕ್ತ ದ್ರಾವಣಗಳಲ್ಲಿರುವ ದ್ರಾವ್ಯವಸ್ತುವಿನ ನಡವಳಿಕೆಯನ್ನು ಕುರಿತ ಈತನ ಸಂಶೋಧನೆ. ಅದರ ವಿವರ ಇಂತಿದೆ. ಅತಿಸಾರರಿಕ್ತ ದ್ರಾವಣದಲ್ಲಿ ವಿಲೀನವಾದ ಪದಾರ್ಥ ಆ ತಾಪ, ಒತ್ತಡ, ಗಾತ್ರ ಪರಿಸ್ಥಿತಿಯಲ್ಲಿ ಅನಿಲವೊಂದಿದ್ದರೆ ಹೇಗೆ ವರ್ತಿಸುತ್ತಿತ್ತೋ ಹಾಗೆಯೇ ಇರುವುದು. ಆದ್ದರಿಂದ ಅನಿಲಗಳಿಗೆ ಅನ್ವಯವಾಗುವ ಎಲ್ಲ ನಿಯಮಗಳಿಗೂ ಈ ದ್ರಾವ್ಯವಸ್ತುಬದ್ಧ ಎಂದು ಪ್ರಯೋಗದಿಂದ ದೃಢಪಡಿಸಿದ. ಈ ವಿನೂತನ ಶೋಧಕ್ಕಾಗಿ 1893ರಲ್ಲಿ ರಾಯಲ್ ಸೊಸೈಟಿಯ ಡೇವಿ ಪದಕ ದೊರೆಯಿತು. 1901ರಲ್ಲಿ ನೊಬೆಲ್ ಪ್ರಶಸ್ತಿ ಸ್ಥಾಪಿಸಲ್ಪಟ್ಟಿತಷ್ಟೆ. ಆ ಸಾಲಿನ ರಸಾಯನವಿe್ಞÁನಕ್ಕೆ ಸಲ್ಲುವ ಪಾರಿತೋಷಿಕ ಇವನಿಗೆ ದಕ್ಕಿತು. ಸ್ಟಾಸ್‍ಫರ್ಟ್ ಲವಣ ಸಂಗ್ರಹವನ್ನು ಕುರಿತ ಇವನ ಸಂಶೋಧನೆ ಜರ್ಮನಿಯ ರಾಸಾಯನಿಕ ಕೈಗಾರಿಕಾಭಿüವೃದ್ಧಿಗೆ ಪೂರಕವಾಯಿತು.			
	(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ